ನಾರಾಯಣ 2 -
	ಸು. 1600. ಬ್ರಾಹ್ಮಣ ಕವಿ. ಉತ್ತರರಾಮಚರಿತೆಯ ಕರ್ತೃ. ತಂದೆ ತಾತಧೀಮಣಿ. ಗುರು ತಿಮ್ಮಣಾರ್ಯ.

	ಉತ್ತರ ರಾಮಾಯಣವನ್ನು ಕುರಿತು ಇವನೂ ಸೇರಿದಂತೆ ತಿರುಮಲೆ ವೈದ್ಯ. ಯೋಗೀಂದ್ರ ನರಸ ಮೊದಲಾದ ಕನ್ನಡ ಕವಿಗಳು ಗ್ರಂಥ ರಚನೆ ಮಾಡಿದ್ದಾರೆ. ಆದರೆ ಗಾತ್ರ ಹಾಗೂ ವಿಷಯ ನಿರೂಪಣೆಗಳಲ್ಲಿ ಈತನ ಕೃತಿಗೆ ಮಹತ್ತ್ವದ ಸ್ಥಾನವಿದೆ. ಈ ಕಾವ್ಯ ಭಾಮಿನೀಷಟ್ಪದಿಯಲ್ಲಿದ್ದು 46 ಸಂಧಿ 2138 ಪದ್ಯಗಳನ್ನೊಳಗೊಂಡಿದೆ. ಇದಕ್ಕೆ ಆಧಾರಗ್ರಂಥ ವಾಲ್ಮೀಕಿ ರಾಮಾಯಣದಲ್ಲಿ ಸೇರ್ಪಡೆಯಾಗಿರುವ ಉತ್ತರ ಕಾಂಡ. ಗ್ರಂಥವಸ್ತು ಜನಸಾಮಾನ್ಯರಿಗೆ ತಿಳಿಯದ ಅನೇಕ ಸಂಗತಿಗಳನ್ನೊಳಗೊಂಡಿದೆ.
(ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ